ಧ್ರುವ 2      -

ಭೂಗೋಳದ ಆವರ್ತನೆಯ ಅಕ್ಷ ಹಾದು ಹೋಗುವ ಬಿಂದುಗಳನ್ನು ಉತ್ತರಧ್ರವ, ದಕ್ಷಿಣ ಧ್ರುವ ಎಂದು ಕರೆಯುತ್ತಾರೆ, ಕಾಂತದ ಕೊನೆಯೂ ಧ್ರುವ. ಇದನ್ನು ಸಾಧಾರಣವಾಗಿ ಕಾಂತೀಯ ಧ್ರುವ (ಮ್ಯಾಗ್ನೆಟಿಕ್ ಪೋಲ್) ಎನ್ನುವುದು ವಾಡಿಕೆ. ಕಾಂತದ ಒಂದು ಕೊನೆಗೆ ಉತ್ತರ ಧ್ರುವವೆಂದೂ ಇನ್ನೊಂದಕ್ಕೆ ದಕ್ಷಿಣ ಧ್ರುವವೆಂದೂ ಹೆಸರು. ಭೂಗೋಳವನ್ನು ಕಾಂತ ಎಂದು ಪರಿಗಣಿಸಿದಲ್ಲಿ ಭೌಗೋಳಿಕ ಉತ್ತರಧ್ರುವವು ಕಾಂತೀಯ ದಕ್ಷಿಣಧ್ರುವವಾಗುವುದು. ಹೀಗೆಯೇ ದಕ್ಷಿಣ ಗೋಳೀಯಧ್ರುವ ಕಾಂತೀಯ ಉತ್ತರ ಧ್ರುವವಾಗುವುದು. ಈ ಧ್ರುವಬಿಂದುಗಳ ಸ್ಥಾನ ಸತತವಾಗಿ ಬದಲಾಗುತ್ತಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ